ಮಂಜೇಶ್ವರ ಉಪಜಿಲ್ಲಾ ಸಂಸ್ಕೃತ ಶಿಬಿರವು ನಮ್ಮ ಶಾಲೆಯಲ್ಲಿ 07,08,09 ನೇ ತಾರೀಖುಗಳಂದು ನಡೆಯಿತು. ಪಿ.ಟಿ.ಎ ಅಧ್ಯಕ್ಷರಾದ ಶ್ರೀ ಪ್ರಸಾದ್ ಭಟ್ ರ ಅಧ್ಯಕ್ಷತೆಯಲ್ಲಿ ಜರಗಿದ ಶಿಬಿರವನ್ನು ಶಾಲಾ ಮುಖ್ಯೋಪಧ್ಯಾಯರಾದ ವೆಂಕಟ್ರಮಣ ನಾಯಕ್ ಸ್ವಾಗತಿಸಿ ವಾರ್ಡ್ ಮೆಂಬರ್ ಶ್ರೀಮತಿ ಕುಞಾಲಿಮ ಉಧ್ಘಾಟಿಸಿದರು. ನಿವೃತ್ತ ಸಂಸ್ಕೃತ ಪ್ರಾಚಾರ್ಯರಾದ ಶ್ರೀ ಪಾದೆಕಲ್ಲು ನರಸಿಂಹ ಭಟ್ ಮುಖ್ಯ ಅತಿಥಿಗಳಾಗಿದ್ದ ಕಾರ್ಯಕ್ರಮದಲ್ಲಿ, ಪ್ರಾಂಶುಪಾಲರಾದ ಬೇಸಿ ಗೋಪಾಲಕೃಷ್ಣ ಭಟ್, ಖಾದರ್ ಹಾಜಿ, ಉಮ್ಮರ್ ಕಾಯರ್ ಕಟ್ಟೆ ,ಅಜ಼ೀಜ್ ಮರಿಕ್ಕೆ, ಮುಸ್ತಫಾ ಕಾಯರ್ಕಟ್ಟೆ ಉಪಸ್ತಿತರಿದ್ದು, ಸಂಸ್ಕೃತ ಅಧ್ಯಾಪಕರಾದ ಸುನಿಲ್ ಕುಮಾರ್ ನಾಯರ್ ವಂದನಾರ್ಪಣೆಯನ್ನು ಮಾಡಿದರು. ಈ ವೇದಿಕೆಯಲ್ಲಿ, ಮುಖ್ಯ ಅತಿಥಿಗಳಾಗಿದ್ದ ನಿವೃತ್ತ ಸಂಸ್ಕೃತ ಪ್ರಾಚಾರ್ಯರಾದ ಶ್ರೀ ಪಾದೆಕಲ್ಲು ನರಸಿಂಹ ಭಟ್ ರನ್ನು ಸನ್ಮಾನಿಸಲಾಯಿತು. ವಿವಿಧ ಶಾಲೆಗಳಿಂದ 130ರಷ್ಟು ವಿದ್ಯಾರ್ಥಿಗಳು ಮತ್ತು ಅದ್ಯಾಪಕರು ಶಿಬಿರಾರ್ಥಿಗಳಾಗಿ ಪಾಲ್ಗೊಳ್ಳುವ ಶಿಬಿರದಲ್ಲಿ ಅಧ್ಯಾಪಕರಾದ ಕೃಷ್ಣಪ್ರಸಾದ್, ಶಿವನಾರಾಯಣ ಭಟ್, ನಾರಾಯಣ ಹೆಗ್ಗಡೆ, ನಾರಾಯಣ ಭಟ್, ಪ್ರಜ್ವಲ್ , ಮಧು, ಪ್ರಮೀಳ, ಶಾರದ ಮೊದಲಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಸಹಕರಿಸಲಿರುವರು.
|
WELCOME |
|
PARTICIPANTS |
|
INAUGURATION |
|
HONOR |
|
FELICITATION |
|
PRESIDENTIAL SPEECH |
|
PLANNING |
No comments:
Post a Comment